ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಇಲ್ಲಿನ 1994- 1995 ನೇ ಸಾಲಿನ ಎಲ್ಲಾ ಹಿರಿಯ ವಿದ್ಯಾರ್ಥಿಗಳೇ....
ತಾವುಗಳು ದಿನಾಂಕ : 06-07-2021 ರಂದು ಶಾಲೆಗೆ ಮೂಲಭೂತ ಅವಶ್ಯಕತೆಯಾದ ಶುದ್ಧ ಕುಡಿಯುವ ನೀರಿನ ಎರಡು ಘಟಕಗಳನ್ನು ಬಹಳ ಪ್ರೀತಿಯಿಂದ ಕೊಡುಗೆಯಾಗಿ ನೀಡಿದ್ದೀರಿ. ತಮ್ಮ ಕನ್ನಡ ಪಂಡಿತರ ಸವಿನೆನಪಿನಲ್ಲಿ ನೀಡಿರುವ ಈ ಸೇವೆಯನ್ನು ಶಾಲೆ ಯಾವತ್ತೂ ನೆನಪಿಸುತ್ತದೆ.
ಈ ಮುಂಚೆಯೂ ತಮ್ಮ ದೇಣಿಗೆ 10 ಡೆಸ್ಕು 10 ಬೆಂಚುಗಳ ಮೂಲಕ ನಮ್ಮ ಶಾಲೆಗೆ ದೊರೆತಿದ್ದು ತಮ್ಮ ಶಾಲೆಯ ಅಭಿಮಾನವನ್ನು ಸೂಚಿಸುತ್ತದೆ.
ನಮಗೂ ಹೆಮ್ಮೆ ಇಂತಹ ಹಿರಿಯ ವಿದ್ಯಾರ್ಥಿಗಳಿಂದ ನಮ್ಮ ಶಾಲೆ ನಿಜವಾಗಲೂ ಧನ್ಯ. ಇನ್ನು ಮುಂದೆಯೂ ನಿಮ್ಮ ಪ್ರೀತಿಯ ಸಹಕಾರ ಸದಾ ಇರಲಿ ಎಂದು ಶಾಲಾ ಶಿಕ್ಷಕ ವೃಂದದ ಪರವಾಗಿ , ವಿದ್ಯಾರ್ಥಿವೃಂದದ ಪರವಾಗಿ ಹಾಗೂ ಶಾಲಾಭಿವೃದ್ಧಿ ಸಮಿತಿಯ ಪರವಾಗಿ ತುಂಬು ಹೃದಯದ ಧನ್ಯವಾದಗಳು.
ವಂದನೆಗಳೊಂದಿಗೆ
ಶ್ರೀಮತಿ ಸುಶೀಲಾ ವಿಟ್ಲ
ಮುಖ್ಯೋಪಾಧ್ಯಾಯರು
0 Comments