Ticker

6/recent/ticker-posts

Header Ads Widget

Responsive Advertisement

ಶುದ್ಧ ಕುಡಿಯುವ ನೀರಿನ ಎರಡು ಘಟಕಗಳ ಕೊಡುಗೆ

ಸಾಮಾಜಿಕ ಜಾಲತಾಣದ ಮೋಡಿ
ಬೀಳಿಸುತಿದೆ ಬಾಂಧವ್ಯಕ್ಕೆ ಬೇಡಿ,
ಕೃತಕವಾಗಿ ಬೆಳೆದ ನಂಟು
ವಿಕೃತದೆಡೆಗೆ ತಳ್ಳುವುದುಂಟು
ಬೆರಳೆಣಿಕೆಗೆ ದೊರೆಯದಷ್ಟು ಸ್ನೇಹಿತರುಂಟು..
ಆದರೆ,ಬೆರಳ ಹಿಡಿದು ನಡೆವವರೆಷ್ಟು ಮಂದಿಯುಂಟು?

ಟಕ್.... ಟಕ್...
ನಮಸ್ತೆ ಎಲ್ಲರಿಗೂ 🙏


ಜೀವನದಲ್ಲಿ ನಾವು ಗಳಿಸಿದಕ್ಕಿಂತ ಕಳೆದು ಹೋದ ಕನಸುಗಳು ಹೆಚ್ಚು ಎಂಬುದೊಂದು ಅನಿಸಿಕೆ.
ಇಂದಿನ ದಿನ ನಾವು ಕಂಡ ಸಣ್ಣ  ಕನಸೊಂದು ಸಾಕಾರವಾಗಿದೆ. ಕೊರೋನ ಸಂಕಷ್ಟದ ನಡುವೆ ನೀವೆಲ್ಲರೂ ಮುಕ್ತ ಮನಸಿನಿಂದ ಸಹಕರಿಸಿ ನಾವು ಕಲಿತ ಸರಕಾರಿ ಪ್ರೌಢಶಾಲೆ ಮಂಚಿಯ ಇಂದಿನ ತಲೆಮಾರಿನ ವಿದ್ಯಾರ್ಥಿಗಳಿಗೆ ಅನಕೂಲವಾಗುವ ನಿಟ್ಟಿನಲ್ಲಿ ಕುಡಿಯುವ ನೀರಿನ ಘಟಕದ ಯೋಜನೆಗೆ ಧನಸಹಾಯ ಮಾಡಿ ಆ ಕಾರ್ಯ ಯಶಸ್ವಿಗೊಳಿಸುವಲ್ಲಿ ನಿಮ್ಮೆಲ್ಲರ ಪ್ರೋತ್ಸಾಹ ಸಹಕಾರ ವರ್ಣಿಸಲಸಾಧ್ಯ. 
ನಮ್ಮ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಸಿಬ್ಬಂದಿಗಳು ನಮಗೆಲ್ಲರಿಗೂ ಶುಭ ಕೋರಿ ಹಾರೈಸಿದ್ದಾರೆ. ನಮ್ಮ ಈ ಯೋಜನೆ ನಮಗೆ ಕನ್ನಡದ ಕಂಪಿನ ರಸ ಸ್ವಾದವನ್ನು ನೀಡಿದ ನಮ್ಮ ನೆಚ್ಚಿನ ಕನ್ನಡ ಪಂಡಿತರ  ಸವಿ ನೆನಪಿಗಾಗಿ ನೀಡಿರುವುದು ಅವರಿಗೆ ನಾವು  ಸಲ್ಲಿಸಿದ ಗೌರವಾರ್ಥ ಕಾಣಿಕೆ. 
ನಿಮಗೆ ಹಾಗು ನಿಮ್ಮ ಕುಟುಂಬದವರಿಗೆ ದೇವರ ಕೃಪೆ,  ಆಶೀರ್ವಾದ ಸದಾ ಇರಲಿ ಎಂದು ಆಶಿಸುತ್ತೇವೆ.
ಜಗತ್ತು ಕೊರೋನ ಮುಕ್ತವಾಗಲಿ. 
ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ. 
ಈ ಕಾರ್ಯದ ಮುಂದಾಳುತ್ವ ವಹಿಸಿದ ಮಿತ್ರ  ಮಧುಶಂಕರನಿಗೆ ನಮನಗಳು.
ನಿಮ್ಮ ಸಲಹೆ ಸೂಚನೆ ಸಹಕಾರ ಸದಾ ಹೀಗೇ ಇರಲಿ. ನಮ್ಮ ಶಾಲಾ ಬಾಂಧವ್ಯ ಇನ್ನೂ ಬಲವಾಗಲಿ. ಗುರುಗಳ ಆಶೀರ್ವಾದ ಸದಾ ಇರಲಿ.


ಧನ್ಯವಾದಗಳು 🙏💐


--- GHS 




 

Post a Comment

0 Comments